ಬೆಟ್ಟದ ಮೇಲೆ ನಿಮಗಾಗಿ ಹಾಡುವೆ

Posted on May 21, 2008.

 

-ಅಲೆಮಾರಿ

ಸಾಹಿರ್ ಲುಧಿಯಾನ್ವಿ ಹೆಸರೆತ್ತಿದ್ದರೆ ಸಾಕು, ಒಬ್ಬ ಪಲ್ದೋ ಪಲ್ ಕಾ ಶಾಯರ್ ನೆನಪಾಗುತ್ತಾನೆ. ವಿರಹ, ವೇದನೆಯ ಭಾವಸಾಗರವನ್ನೇ ಉಕ್ಕಿಸುತ್ತಾನೆ. ಮತ್ತೊಮ್ಮೆ ಕಿಡಿ ಕಿಡಿಯಾಗಿ ಸಿಡಿಯುತ್ತಾನೆ; ಸ್ಫೋಟಿಸುತ್ತಾನೆ. ಸಾಹಿರ್ ಇದ್ದದ್ದೇ ಹಾಗೆ. ಆತನ ಕಾವ್ಯದ ಪ್ರತಿ ಸಾಲಿನಲ್ಲಿ ಒಲವಿದ್ದರೆ, ಅದರ ಜೊತೆಗಿದ್ದ ನೋವಿನಿಂದಾಗಿಯೇನೋ ಎಂಬಂತೆ ಒಬ್ಬ ಹೋರಾಟಗಾರ ಸಿಡಿಯುತ್ತಿದ್ದ.
ಸಮಕಾಲೀನರ ಕಾವ್ಯದೇವರು, ಸೌಂದರ್‍ಯ, ಮದ್ಯದ ಮತ್ತಿನಲ್ಲಿದ್ದರೆ, ಸಾಹಿರ್ ತನ್ನ ಕಾವ್ಯದ ತೆಕ್ಕೆಗೆ ಏನೆನ್ನೆಲ್ಲಾ ಎಳೆದು ತಂದಿದ್ದ. ಬೇಜವಾಬ್ದಾರಿ ರಾಜಕಾರಣವನ್ನು ಬೂಟಾಟಿಕೆಯ ಹೆಮ್ಮೆಯನ್ನು(ಜಿನ್ಹೆ ನಾಝ್ ಹೈ ಹಿಂದ್ ಪರ್ ವೋ ಕಹಾ ಹೈ ) ಹೀಯಾಳಿಸಿದ್ದ. ಅರಾಜಕತೆ, ಅಸಮಾನತೆ, ಸಂವೇದನೆಯನ್ನೇ ಕಳೆದುಕೊಂಡ ಸಮಾಜದ ಬಗ್ಗೆ ಸೂಕ್ಷ್ಮ ಸಂವೇದನೆಯಿಂದ ಸ್ಪಂದಿಸಿದ್ದ.ನಫ್ರತೋ ಕಿ ಜಹಾನ್ ಮೆ ಪ್ಯಾರ್ ಕಿ ಬಸ್ತಿಯಾ ಬಸಾನಿ ಹೈ ಅಂತಾನೆ..
ಸಾಹಿರನ ಬೇಗುದಿಗಳೆಲ್ಲಾ ಹೋರಾಟವಾಗಿತ್ತು. ಅವನ ಹೋರಾಟಕ್ಕೆ ಪ್ರೀತಿಯೇ ಶಕ್ತಿಯಾಗಿತ್ತು. ಹಾಗಂತ ಸಾಹಿರನೇ ಸಾರಿದ, ‘ನನ್ನ ಕ್ರಾಂತಿಯ ಮಾತುಗಳು ಜಗತ್ತನ್ನು ಚಿಂತನೆಗೆ ಹಚ್ಚಿಸುವುದಕ್ಕೆ, ಆದರೆ ಎದೆಯ ತುಂಬ ಪ್ರೇಮ ಕಾವ್ಯವೇ ತುಂಬಿದೆ’. ಅವನ ಕಾವ್ಯ ಒಬ್ಬ ಕ್ರಾಂತಿಕಾರಿಯ ನೇರ ಮಾತಿನಂತೆ. ಆಡಂಬರ ಇಲ್ಲದ್ದು, ಪ್ರೀತಿ ತುಂಬಿದ್ದು.
ಪ್ರೀತಿಯಷ್ಟೇ ಅಲ್ಲ…

  • ಜಿಂದಗಿ ಸಿರ್ಫ್ ಮೊಹಬ್ಬತ್ ನಹೀ ಕುಚ್ ಔರ್ ಭಿ ಹೈ
    ಜುಲ್ಫ್ -ಓ- ರುಕ್ಷಾರ್ ಕಿ ಜನ್ನತ್ ನಹೀ ಕುಚ್ ಔರ್ ಭಿ ಹೈ
    ಭೂಖ್ ಔರ್ ಪ್ಯಾಸ್ ಕಿ ಮಾರಿ ಹುಯಿ ಇಸ್ ದುನಿಯಾ ಮೆ
    ಇಷ್ಕ್ ಹಿ ಏಕ್ ಹಕೀಕತ್ ನಹೀ ಕುಚ್ ಔರ್ ಭಿ ಹೈ
  • ನಿಮ್ಮಿಂದ ಬಲ ಪಡೆದು ನಿಮಗೆ ದಾರಿ ತೋರುವೆ
    ಬಾವುಟ ಹಾರಿಸಿ ಗೆಳೆಯರೆ, ಬೆಟ್ಟದ ಮೇಲೆ ನಿಮಗಾಗಿ ಹಾಡುವೆ
    ನನ್ನ ಬದುಕಿಗೊಂದೇ ಗುರಿ ಇನ್ನು, ಬಂಧನದ ಬೇಡಿ ಕರಗಿಸುವುದು,
    ಇಬ್ಬನಿಯ ಹನಿಯಲ್ಲ, ನನ್ನ ಕಾವ್ಯ ಕೆಂಡದ ಮಳೆ ಸುರಿಸುವುದು

ಪ್ರೀತಿ ಇಲ್ಲದೇ ಇಲ್ಲ…
ಸಾಹಿರ್
ಕನವರಿಸುತ್ತಾನೆ. ಕನಿಕರಿಸುತ್ತಾನೆ. ಪ್ರತಿಭಟಿಸುವ, ಪ್ರತಿರೋಧಿಸುವ ದನಿಯಲ್ಲಿ ಪ್ರೀತಿ ಒಳಸುಳಿಯನ್ನು ತೇಲಿ ಬಿಡುತ್ತಾನೆ.

  • ಪ್ರೀತಿಯನ್ನೇನು ಹಿಡಿದಿಡಲಾರೆ ಆದರೂ ಹೇಳು,
    ನಿನ್ನ ನಾ ಪ್ರೀತಿಸಲೇ… ಬೇಡವೇ.. ಎಂದು ಕೇಳುತ್ತಾನೆ.
  • ನನ್ನ ಕನಸ ಕಂಗಳನು ಸಿಂಗರಿಸುವವಳೇ
    ನಿನ್ನ ಕನಸ ಕಂಗಳಲಿ ನಾನು ಸಾಗುವೆನೇನೆ?
    ನಿನ್ನ ಕಂಗಳ ಕೇಳಿ ಹೇಳುವೆಯೇನು
    ನಾ ಕಳೆವ ರಾತ್ರಿಗಳು ಬೆಳಗು ಕಾಣುವವೇನು?
    ನಾಲ್ಕು ದಿನದ ಈ ಸಖ್ಯ ಸಖ್ಯವೂ ಅಲ್ಲ
    ಜೀವನವಿಡೀ ಅನುಭವಿಸುವ ಸಂಕಟವಾಯ್ತಲ್ಲ
    ಬದುಕು ಹೇಗೋ ದುಸ್ತರವಾಗಿತ್ತು,
    ಈಗ ಉಸಿರಾಡುವುದು ಬೇಸರವಾಗಿದೆಯಲ್ಲ. ಎಂದು ಪರಿತಪಿಸುತ್ತಾನೆ
Read Full Post | Make a Comment ( None so far )

Recently on ಅವಧಿ...

ಬಾ ಇಲ್ಲಿ ಅವಿತುಕೋ

Posted on May 21, 2008.

ಮಹಮದ್ ಮ್ಯಾಜಿಕ್ ೧೮

Posted on May 21, 2008.

ಇದನ್ನು ಚರ್ಚಿಸೋಣವೇ ?

Posted on May 21, 2008.

ಗುಜ್ಜಾರ್ ಗೆರೆ ೧೫

Posted on May 20, 2008.

ಗೆಲ್ಲಬೇಕು ಬಾಹುಬಲಿಯಂತೆ

Posted on May 20, 2008.

ಅಪಾರ ಮುಖ

Posted on May 20, 2008.

ಕದಬಾಗಿಲಿರಿಸಿದ ಕಳ್ಳ ಮನೆ ಇದು…

Posted on May 17, 2008.

ಗಾನಾ ಬದಲಿಗೆ ಒಬ್ಬ ‘ಚೇತನಾ’

Posted on May 15, 2008.

  • Top Posts

  • ಯಾರಿಲ್ಲಿಗೆ ಬಂದವರು ಕಳೆದ ಇರುಳು? Locations of visitors to this page
  • ಕದವ ತಟ್ಟಿದವರು

    • 68,231 hits
  • ಪ್ರತಿಕ್ರಿಯಿಸಿದವರು

    ಅಮೆರಿಕಾದಿಂದ: ವಲ್ಲೀಶ ಶಾಸ್ತ್ರಿ, ಎಂ ಆರ್ ವೆಂಕಟೇಶ್, ಮಧು ಕೃಷ್ಣಮೂರ್ತಿ, ವಂದನಾ, ಕೆ ತ್ರಿವೇಣಿ ಶ್ರೀನಿವಾಸರಾವ್(ತುಳಸೀವನ ಬ್ಲಾಗ್), ಜ್ಯೋತಿ ಮಹದೇವ್(ಜ್ಯೋತಿ ಹರಿವ ಲಹರಿ ಬ್ಲಾಗ್), ಶ್ರೀವತ್ಸ ಜೋಶಿ, ಶ್ರೀಕಂಠ(ಸಂಗಮ ಕನ್ನಡ ಸಂಘ), ವಿಕ್ರಮ್ ಹತ್ವಾರ್, ಮೀರಾ, ಡಾ. ಗುರುಪ್ರಸಾದ್ ಕಾಗಿನೆಲೆ, ನಳಿನಿ ಮಯ್ಯ. ಇಮೇಲ್: ಡಾ. ಯು ಆರ್ ಅನಂತಮೂರ್ತಿ, ಕೆ ವಿ ತಿರುಮಲೇಶ್, ಜಿ ಎನ್ ಮೋಹನ್, ಜೋಗಿ, ನಾಗೇಶ್ ಹೆಗಡೆ, ಎಸ್ ಆರ್ ವಿಜಯಶಂಕರ್, ಎಸ್ ಕೆ ಶಾಮಸುಂದರ್, ಹಾಲ್ದೊಡ್ಡೇರಿ ಸುಧೀಂದ್ರ, ಎಚ್ ಡುಂಡಿರಾಜ್, ವಸುಧೇಂದ್ರ, ಕಾಗಿನೆಲೆ ಗುರುಪ್ರಸಾದ್, ಕೆ ಫಣಿರಾಜ್, ಎಲ್ ಸಿ ಸುಮಿತ್ರ, ಶಿವರಾಮ್ ಪೈಲೂರ್, ಬೇಲೂರು ರಾಮಮೂರ್ತಿ, ಎಸ್ ಎಂ ಶಶಿಕಾಂತ್, ನರೇಂದ್ರ ಪೈ, ಶ್ರೀದೇವಿ, ಸುಧೀರ್ ದೇವದಾಸ್, ಕೆ ಪಿ ಈಶಾನ್ಯೆ, ಡಿ ಎಸ್ ನಾಗಭೂಷಣ, ಸುಗತ ಶ್ರೀನಿವಾಸರಾಜು, ಶ್ರೀನಿವಾಸ, ಮೇಟಿ ಮಲ್ಲಿಕಾರ್ಜುನ, ರಾಘವೇಂದ್ರ ಗೌಡ, ಸಿರಾಜ್ ಅಹಮದ್, ಅಬ್ದುಲ್ ರಷೀದ್, ಆತೀಪಿ, ಪದ್ಮಜಾ, ವಿಜಯೇಂದ ಎಂ ಎನ್, ಗೋದಾವರಿ, ರಾಜೀವ್ ರಾವ್, ವೆಂಕಟ್ರಮಣ ಗೌಡ, ಲಕ್ಷ್ಮಣ ಕೊಡಸೆ, ಸಾರಂಜಿನಿ, ರಮೇಶ್ ಡಿ ಕೆ, ಬಿ ಜಯಕುಮಾರ್, ಕೃಷ್ಣಪ್ರಸಾದ್ ಜಿ, ಸಿಂಧು ರಾವ್, ಗಾಣದಾಳು ಶ್ರೀಕಂಠ, ಶಂಕರ್, ಸುರೇಶ್ ಕೆ, ಕೇಶವ ಎಚ್ ಕೊರ್ಸೆ, ಸುಧನ್ವ ದೇರಾಜೆ, ಡಾ. ಸತ್ಯನಾರಾಯಣ ಭಟ್ , ಶಮಂತ, ನೆತ್ರಕೆರೆ ಉದಯಶಂಕರ, ಎಚ್ ಪಿ ನಾಡಿಗ್, ಡಾ. ಪ್ರಕಾಶ್ ಭಟ್, ಸುಧಾ, ಬಾಲಚಂದ್ರ ಹೆಗಡೆ, ಎಚ್ ಗಂಗರಾಜ್, ಸುಶ್ರುತ ದೊಡ್ಡೇರಿ, ಶ್ರೀನಿಧಿ ಡಿ ಎಸ್, ಸಂದೀಪ್ ನಡಹಳ್ಳಿ, ಹರ್ಷ, ವಿಕಾಸ್, ಡಾ. ಕೆ ಪುಟ್ಟಸ್ವಾಮಿ, ಎಚ್ ಎಸ್ ಜಯಸ್ವಾಮಿ, ಬಿ ಎಂ ಹನೀಫ್, ದಶರಥ, ವಾಸುದೇವ್ ಶರ್ಮಾ, ಚೇತನಾ ತೀರ್ಥಹಳ್ಳಿ, ಕವಿತಾ ಎಲ್, ಕೇಶವ ಮಳಗಿ, ಎನ್ ಕೆ ವಸಂತರಾಜ್, ಎಚ್ ಆರ್ ಎಸ್ ಕುಮಾರ್, ಗಿರೀಶ್, ಮಾಲತಿ ಎಸ್, ಶ್ರೀನಾಥ್ ಭಲ್ಲೆ, ಟೀನಾ, ಎಚ್ ಸಿ ಜಯಪ್ರಕಾಶ್, ಎಂ ಎಸ್ ಮೂರ್ತಿ, ನಟರಾಜ್ ಹುಳಿಯಾರ್, ಪತ್ರೇಶ್ ಹಿರೇಮಠ, ಜಯಕಿಶೋರ್, ಅವಿನಾಶ್, ಶ್ರೀ, ಅಶೋಕ್ ಕುಮಾರ್ , ಕೃಷ್ಣ ಮಾಸಡಿ, ಗೌರಿ ಕಳಸಾಪುರ, ಸಿದ್ದು ದೇವರಮನಿ, ಲಕ್ಷ್ಮೀನರಸಿಂಹ, ಶಿವ ಕೆ ಎನ್, ಶಾರದಾ, ಶಶಿ ಸಂಪಳ್ಳಿ, ಪರಮೇಶ್ವರ ಭಟ್, ದಿನೇಶ್, ಪ್ರಿಯಾ ಭಟ್, ಅರ್ಚನಾ ಗೊರೂರು, ನಾಗೇಂದ್ರ ತ್ರಾಸಿ, ವಿಕಾಸ್ ನೇಗಿಲೋಣಿ, ಕರಿಬಸಪ್ಪ ಪಿ, ನಾಗರಾಜ್, ಸುಷ್ಮಾ, ಸತೀಶ್ ಶಿಲೆ, ಶ್ರೀಕಾಂತ್ ಮಿಶ್ರಿಕೋಟಿ, ತಿಮ್ಮ, ನಾಗರಾಜ್, ಚೇತನ್, ಶ್ರೀಧರ್, ಶಂಕರ್, ನೀಲಾಂಜನ, ಬಸವಕುಮಾರ್ ಟಿ ಎನ್, ಸಿರಾಜ್ ಅಹಮದ್, ನಾಗರಾಜ್ ವಸ್ತಾರೆ, ವೀಣಾ, ಜೋಮನ್, ಅಲೆಮಾರಿ, ರವಿಕೃಷ್ಣ ರೆಡ್ಡಿ, ಪಾರ್ವತಿ ಚೀರನಹಳ್ಳಿ, ಚಂದಿನ.

Liked it here?
Why not try sites on the blogroll...